ಅಕ್ಷಿ ಒಂದು ಅಧ್ಬುತವಾದ ಕಲಾತ್ಮಕ ಚಲನಚಿತ್ರ. ಡಾ ।। ರಾಜಕುಮಾರ್ ಅವರ ನೇತ್ರದಾನದಿಂದ ಪ್ರೇರಿತವಾದ ಕಥೆ, ನಿರ್ದೇಶಕ ಮನೋಜ್ ಕುಮಾರ್ ಹಾಗೂ ತಂಡದ ಉನ್ನತ ಪ್ರಯತ್ನದಿಂದ ತೆರೆಯಮೇಲೆ ಉತ್ತಮವಾಗಿ ಮೂಡಿಬಂದಿದೆ. ಕಲಾ ದೇಗುಲ ಶ್ರೀನಿವಾಸ್ ಅವರ ಮೋಹಕ ಸಂಗೀತವಿದೆ, ಎಸ್ ಪಿ ಬಿ ಅವರ ಮಧುರ ಕಂಠಸಿರಿ ಇದೆ. ಚಿಕ್ಕಮಗಳೂರಿನ ಮಲೆನಾಡಿನ ಸೌಂದರ್ಯವಿದೆ. ಪ್ರತಿಯೊಬ್ಬ ಕಲಾವಿದರೂ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅತೀ ಮುಖ್ಯವಾಗಿ, ಪ್ರತಿಯೊಬ್ಬ ವೀಕ್ಷಕರಿಗೂ ಒಂದು ಅತ್ಯುತ್ತಮ ಸಂದೇಶವಿದೆ. ರಾಷ್ಟ್ರ ಪ್ರಶಸ್ತಿ ಪಡೆದ ಅಕ್ಷಿ ಸಿನಿಮಾ ಪ್ರತಿಯೊಂದು ವಿಭಾಗದಲ್ಲೂ ಅದನ್ನು ಸಮರ್ಥಿಸುವಂತಿದೆ. ಪ್ರತಿಯೊಬ್ಬರೊ ನೋಡಲೇಬೇಕಾದ ಅಥ್ಯುತ್ತಮ ಚಲನಚಿತ್ರ. ದಯವಿಟ್ಟು ತಮ್ಮ ಕುಟುಂಬ ಹಾಗು ಸ್ನೇಹಿತರೊಂದಿಗೆ ಸಿನಿಮಾಮಂದಿರಗಳಿಗೆ ಹೋಗಿ "ಅಕ್ಷಿ" ಸಿನೆಮಾವನ್ನು ನೋಡಿ, ಒಂದು ಒಳ್ಳೇ ಉತ್ತಮ ಕನ್ನಡ ಸಿನೆಮಾವನ್ನು ಬೆಂಬಲಿಸಿ. ಈ ಚಲನಚಿತ್ರ ವೀಕ್ಷಿಸಿದ ಪ್ರತಿಯೊಬ್ಬರಿಗೂ ಸಿನಿಮಾ ಮಂದಿರದಿಂದ ಹೊರನೆಡೆಯುವಾಗ ನಾವೂ ಕೂಡ ನೇತ್ರದಾನ ಮಾಡಬೇಕು ಎಂದು ಅನಿಸದಿರಲಾರದು.
Now
2022
2007
1992
1972
1995
2014
1990
2023
2018