AGHANASHINI (2019)

Aghanashini

Plot


ಪಶ್ಚಿಮ ಘಟ್ಟದ ನದಿಗಳಲ್ಲೇ ಬಹು ವಿಶೇಷವಾದದ್ದು ಅಘನಾಶಿನಿ. ಅಭಿವೃದ್ಧಿಯ ನೆಪದಲ್ಲಿ ನಡೆಯುವ ಎಲ್ಲ ಹಿಂಸೆಗಳಿಂದ ಅದೃಷ್ಟವಶಾತ್ ತಪ್ಪಿಸಿಕೊಂಡು ಸಾವಿರಾರು ವರುಷಗಳಿಂದ ತನ್ನದೇ ಹರಿವಿನಲ್ಲಿ ಸಾಗುತ್ತಿದೆ ಅಘನಾಶಿನಿ ನದಿ. ಯಾವುದೇ ಆಣೆಕಟ್ಟು ಮತ್ತು ಇತರ ಅಡೆತಡೆ ಇಲ್ಲದೇ ಹರಿಯುತ್ತ ತನ್ನತನ ಕಾಪಾಡಿಕೊಂಡಿರುವ ಅಘನಾಶಿನಿ ಅನೇಕ ಕೌತುಕಮಯ ಸಂಗತಿಗಳಿಂದ ತುಂಬಿಕೊಂಡಿದೆ. ಅವುಗಳಲ್ಲಿ ಕೆಲವು ವಿಶ್ವದಲ್ಲೇ ಎಲ್ಲಿಯೂ ಕಾಣಸಿಗದಂತವು. ಅಂತವುಗಳಲ್ಲಿ ಹಲವು ವಿಶೇಷ ಕಥೆಗಳನ್ನು ಆಯ್ದುಕೊಂಡು ನದಿಯ ನಿರೂಪಣೆಯಲ್ಲೇ ಚಿತ್ರ ಮೂಡಿಸಿರುವುದು ಈ ಸಾಕ್ಷ್ಯಚಿತ್ರದ ಹೆಗ್ಗಳಿಕೆ. ಕಳೆದ ಹಲವಾರು ವರುಷಗಳಿಂದ ಭಾರತ ಭೂದೃಶ್ಯಗಳ ಅನನ್ಯ ಛಾಯಾಗ್ರಹಣದಲ್ಲಿ ತೊಡಗಿಕೊಂಡಿರುವ ಲ್ಯಾಂಡ್ಸ್ಕೇಪ್ ವಿಝಾರ್ಡ್ಸ್ ಎಂಬ ಛಾಯಾ ತಂಡದಿಂದ ಹೊರಬರುತ್ತಿರುವ “ಅಘನಾಶಿನಿ’ಯು ರೋಹಿಣಿ ನಿಲೇಕಣಿ ಫಿಲಾನ್ಥ್ರೋಪಿಸ್ ಸಹಭಾಗಿತ್ವದಲ್ಲಿ ಮತ್ತು ಕ್ರೌಡ್ ಫಂಡಿಂಗ್ ನಲ್ಲಿ ನಿರ್ಮಾಣ ಗೊಂಡಿದೆ.
Wall of fame
Language Kannada
Release Date 02-February-2019
Direction
Production
Music
Stars
D.O.P
Writers
Editing
Runtime (mins) 41
No of Theaters
Budget (Rs.)
Box Office (Rs.)
Genre
Type Documentary
amazon prime membership amazon prime membership amazon prime membership best selling electronics on amazon

User Review


Download DJ Talkies Android App